ಅರ್ಜೆಂಟೈನಾದ ವಿಶ್ವಶ್ರೇಷ್ಠ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ಇಂದು (ಡಿಸೆಂಬರ್ 13) ಕೋಲ್ಕತ್ತಾಗೆ ಭೇಟಿ ನೀಡಿದ್ದಾರೆ. ಈ ಹಿನ್ನೆಲೆ ವಿವೇಕಾನಂದ ಯುವಭಾರತಿ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು. ಆದರೆ. ಈ ವೇಳೆ ಬಾಟಲಿಗಳ ತೂರಿದ ಘಟನೆ ನಡೆದಿದ್ದು, ಇದು ಇಡೀ ದೇಶದ ಗಮನ ಸೆಳದಿದೆ. ಫುಟ್ಬಾಲ್ ಸೂಪರ್ಸ್ಟಾರ್ ಲಿಯೋನೆಲ್ ಮೆಸ್ಸಿಯವರ ಬಹುನಿರೀಕ್ಷಿತ ಕೋಲ್ಕತ್ತಾ ಪ್ರವಾಸ ಹಿನ್ನೆಲೆ ಡಿಸೆಂಬರ್ 13ರ ಶನಿವಾರ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಅಭಿಮಾನಿಗಳು ಆಕ್ರೋಶಗೊಂಡು ಬಾಟಲಿಗಳನ್ನು...
