ಇಬ್ಬರು ಅನ್ಕ್ಯಾಪ್ಡ್ ಆಟಗಾರರಿಗೆ ಸಿಎಸ್ಕೆ 28.4 ಕೋಟಿಗೆ ನೀಡಿ ಖರೀದಿಸಿದ್ದೇಕೆ? ಚೆನ್ನೈ ಸೂಪರ್ ಕಿಂಗ್ಸ್ (CSK) ಮಂಗಳವಾರ ನಡೆದ ಮಿನಿ ಹರಾಜಿನಲ್ಲಿ ಅನ್ಕ್ಯಾಪ್ಡ್ ಆಟಗಾರರಾದ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ (Prashant Veer and Karthik Sharma) ಅನ್ನು ತಲಾ ರೂ. 14.20 ಕೋಟಿಗೆ ಖರೀದಿಸಿ ದಾಖಲೆ ಬರೆದಿದೆ. 43 ಕೋಟಿ ಬಜೆಟ್ನಲ್ಲಿ ಈ ಇಬ್ಬರಿಗೆ 28.4 ಕೋಟಿ ವಿನಿಯೋಗಿಸಿದ್ದು, ಕ್ರಿಕೆಟ್ ಲೋಕವನ್ನೆ ಬೆಕ್ಕಸ ಬೆರಗಾಗಿಸಿದೆ. ಈ ಮೊತ್ತ ಐಪಿಎಲ್ ಹರಾಜಿನ ಇತಿಹಾಸದಲ್ಲಿ ಅನ್ಕ್ಯಾಪ್ಡ್ ಆಟಗಾರರಿಗೆ...
