WPL 2026 :ಆರ್ಸಿಬಿ ಐವರನ್ನು ಉಳಿಸಿಕೊಳ್ಳುವ ಅವಕಾಶವಿದ್ದರೂ ನಾಲ್ವರನ್ನ ಆಯ್ಕೆ ಮಾಡಿದ್ದೇಕೆ? ಯಾರು ಹಾಗೂ ಕಾರಣವೇನು?
ಈಗಾಗಲೇ ಡಬ್ಲ್ಯೂಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್ ಆಗಿದೆ. ಇನ್ನೂ 2024ರಲ್ಲಿ ಟ್ರೋಫಿ ಎತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 4ನೇ ಆವೃತ್ತಿಯ ಮೆಗಾ ಹರಾಜಿಗೂ ಮುನ್ನ ನಾಲ್ವರು ಆಟಗಾರರನ್ನು ಉಳಿಸಿಕೊಂಡು ಉಳಿದ ಎಲ್ಲಾರನ್ನು ಕೈಬಿಟ್ಟಿದೆ. ಹಾಗಾದ್ರೆ ಯಾರೆಲ್ಲಾ ಇದ್ದಾರೆ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ಗರಿಷ್ಠ ಐವರು ಐವರು ಆಟಗಾರ್ತಿಯರನ್ನು ಉಳಿಸಿಕೊಳ್ಳುವ ಅವಕಾಶ ಇದ್ದು, ಉಳಿದ ಎಲ್ಲಾ ಆಟಗಾರ್ತಿಯರನ್ನು ಬಿಡುಗಡೆಗೊಳಿಸಬೇಕಾಗುತ್ತದೆ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾತ್ರ ನಾಲ್ವಾರನ್ನು ಮಾತ್ರ ಉಳಿಸಿಕೊಂಡು ಉಳಿದ ಎಲ್ಲಾರನ್ನು ಬಿಡುಗಡೆಗೊಳಿಸಿದೆ. ಹಾಗಾದ್ರೆ ಯಾರೆಲ್ಲಾ ಉಳಿದುಕೊಂಡಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
WPLನ ಮೆಗಾ ಹರಾಜಿಗೂ ಮುಂಚಿತವಾಗಿ ಆರ್ಸಿಬಿಯು ನಾಲ್ವರು ಆಟಗಾರ್ತಿಯರನ್ನು ರಿಟೈನ್ ಮಾಡಿಕೊಂಡಿದೆ. ಗರಿಷ್ಠ ಐವರನ್ನು ಉಳಿಸಿಕೊಳ್ಳುವ ಅವಕಾಶ ಇದ್ದರೂ ಸಹ ನಾಲ್ವರನ್ನು ಮಾತ್ರ ಯಾಕೆ ಉಳಿಸಿಕೊಂಡಿದೆ ಎನ್ನುವ ಪ್ರಶ್ನೆ ಬಹುತೇಕ ಮಂದಿಯ ತಲೆಯಲ್ಲಿರುತ್ತದೆ. ಅದಕ್ಕೆಲ್ಲ ಉತ್ತರವನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.
ನಿಯಮದ ಪ್ರಕಾರ, ಒಂದು ಫ್ರಾಂಚೈಸಿ ಗರಿಷ್ಠ ಐವರನ್ನು ಉಳಿಸಿಕೊಳ್ಳಲು ಬಯಸಿದರೆ ಅದರಲ್ಲಿ ಒಬ್ಬರು ಅನ್ಕ್ಯಾಪ್ಡ್ಆಟಗಾರ್ತಿ ಇರಬೇಕು. ಅಂದರೆ, ರಾಷ್ಟ್ರೀಯ ತಂಡದ ಪರ ಆಡಿರದ ಆಟಗಾರ್ತಿಯನ್ನು ಒಳಗೊಂಡಂತೆ ಐವರನ್ನು ಉಳಿಸಿಕೊಳ್ಳಬಹುದಾಗಿದೆ. ಇನ್ನು ಬೆಂಗಳೂರು ತಂಡದಲ್ಲಿರುವವರು ಬಹುತೇಕರು ರಾಷ್ಟ್ರೀಯ ತಂಡದ ಪರ ಆಡಿದ ಆಟಗಾರ್ತಿಯರಾಗಿದ್ದಾರೆ.
ಇನ್ನು ಅನ್ಕ್ಯಾಪ್ಡ್ಆಗಿರುವ ಪ್ಲೇಯರ್ಸ್ ಕಳೆದ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಆದ್ದರಿಂದ ಆರ್ಸಿಬಿ ನಾಲ್ವರು ಸ್ಟಾರ್ ಆಟಗಾರ್ತಿಯರನ್ನು ಮಾತ್ರ ಉಳಿಸಿಕೊಂಡಿದೆ. ಇನ್ನೂ ಆರ್ಸಿಬಿಗೆ ಓರ್ವ ಆಟಗಾರ್ತಿ ಮೇಲೆ ಆರ್ಟಿಎಂ ಕಾರ್ಡ್ ಬಳಸಲು ಸಹ ಅವಕಾಶ ಇದೆ.



