ಅವನ ಬಗ್ಗೆ ಏನು ಹೇಳೋದು? ಅವನು ನನ್ನ ಗೆಳೆಯ ಎಂದು ರಾಜ್ ಬಿ ಶೆಟ್ಟಿ ಹೇಳಿದ್ಯಾರಿಗೆ?
45 ಚಿತ್ರದಲ್ಲಿ (45 Movie) ಮಲ್ಟಿಸ್ಟಾರ್ಸ್ ನಟಿಸಿದ್ದಾರೆ. ಮೊದಲನೆಯದಾಗಿ ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ (Pramod Shetty), ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಹಲವು ಖ್ಯಾತ ಕಲಾವಿದರು ಈ ಚಿತ್ರದಲ್ಲಿದ್ದಾರೆ.
ಇದರ ಜೊತೆಗೆ, ಚಿತ್ರದ ಪ್ರಮುಖ ಪಾತ್ರಗಳಲ್ಲಿ ಸುಧಾರಾಣಿ ನಟಿಸಿದ್ದು, ಶಿವರಾಜ್ ಕುಮಾರ್ (Shiva Rajkumar) ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ಅಲ್ಲದೆ ಇದೇ ಚಿತ್ರದಲ್ಲಿ ಪ್ರಮೋದ್ ಶೆಟ್ಟಿಯೂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಹೀಗೆ ಹಲವಾರು ಪಾತ್ರಗಳು ಮತ್ತು ಪಾತ್ರಧಾರಿಗಳ ಬಗ್ಗೆ ರಾಜ್ ಬಿ ಶೆಟ್ಟಿ (Raj B Shetty) ಮುಕ್ತವಾಗಿ ಮಾತನಾಡಿ, ಬಹುತೇಕ ಕಲಾವಿದರ ಅಭಿನಯವನ್ನು ಹೊಗಳಿದ್ದಾರೆ.
ಆದರೆ, ಇದ್ರ ನಡುವೆ ಒಂದು ಕಲಾವಿದನ ಬಗ್ಗೆ ಅವರು ಯಾವುದೇ ಮಾತನ್ನೇ ಆಡದಿರುವುದು ಗಮನ ಸೆಳೆದಿದೆ. ಆದ್ದರಿಂದ, ಯಾಕೆ ಆ ಕಲಾವಿದನ ಕುರಿತು ಮೌನ ವಹಿಸಿದರು ಎಂಬ ಪ್ರಶ್ನೆಗೆ ಕಾರಣವನ್ನೂ ಅವರು ಸ್ಪಷ್ಟಪಡಿಸಿದ್ದಾರೆ ಎಂದು Uttishtabharatha ವರದಿ ಮಾಡುತ್ತದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ ಬಿ ಶೆಟ್ಟಿ ಹೇಳಿರುವ ಇನ್ನಷ್ಟು ವಿವರಗಳು ಇಲ್ಲಿವೆ… ಓದಿ.
ಪ್ರಮೋದ್ ಶೆಟ್ರ ಬಗ್ಗೆ ಹಂಗ್ಯಾಕ್ ಹೇಳಿದ್ರು
ರಾಜ್ ಬಿ ಶೆಟ್ಟಿ ಹಾಗೂ ಪ್ರಮೋದ್ ಶೆಟ್ಟಿ ಒಳ್ಳೆ ಸ್ನೇಹಿತರೆ ಆಗಿದ್ದಾರೆ. ಇವರ ಸ್ನೇಹ ಹೇಗಿದೆ ಅನ್ನೋದು ಗೊತ್ತೇ ಇದೆ. ಆದರೂ ರಾಜ್ ಬಿ ಶೆಟ್ರು 45 ಚಿತ್ರದ ಟ್ರೈಲರ್ ರಿಲೀಸ್ ವೇದಿಕೆ ಮೇಲೆ ಏನೂ ಹೇಳಲೇ ಇಲ್ಲ.
ಪ್ರಮೋದ್ ಶೆಟ್ಟಿ ಪಕ್ಕದಲ್ಲಿಯೇ ನಿಂತಿದ್ದರು. ಆದರೂ ಏನೂ ಹೇಳೋಕೆ ಹೋಗ್ಲಿಲ್ಲ. ಬದಲಾಗಿ ಆತ ನನ್ನ ಗೆಳೆಯನೆ ಬಿಡಿ. ಆತನ ಬಗ್ಗೆ ಏನು ಹೇಳೋದು ಅಂತ ಅಷ್ಟೆ ಆತ್ಮೀಯವಾಗಿಯೇ ಹೇಳಿದರು.
ಇದಕ್ಕೆ ಪ್ರಮೋದ್ ಶೆಟ್ರು ಏನೂ ಹೇಳೋಕೆ ಹೋಗ್ಲೇ ಇಲ್ಲ. ಆದರೆ, ತಮ್ಮ ಪಾತ್ರದ ಹಿಂದಿನ ಇಂಟ್ರಸ್ಟಿಂಗ್ ವಿಚಾರ ಹೇಳಿದರು.
ಬಿರಿಯಾನಿ ನನ್ನ ಹುಡುಕಿಕೊಂಡು ಬಂತು
45 ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅಭಿನಯಿಸಿದ್ದಾರೆ. ಇವರ ಪಾತ್ರದ ಖದರ್ ವೈಬ್ರಂಟ್ ಆಗಿಯೇ ಇದೆ. ಆದರೆ, ಈ ಒಂದು ಪಾತ್ರಕ್ಕೆ ಬೇರೆ ಕಲಾವಿದರು ಆಯ್ಕೆ ಆಗಿದ್ದರು.
ಆದರೆ, ಅವರು ಬೇಡ ಅಂದ್ಮೇಲೆ ಪ್ರಮೋದ್ ಶೆಟ್ರು ಈ ಪಾತ್ರವನ್ನ ಮಾಡೋಕೆ ಒಪ್ಪಿಕೊಂಡರು. ನಿರೀಕ್ಷೆ ಮಾಡಿರಲಿಲ್ಲ. ಆದರೆ, ಈ ಪಾತ್ರ ಹುಡುಕಿಕೊಂಡು ಬಂತು. ಕೆಲಸ ಮಾಡಿರೋ ಖುಷಿ ಇದೆ. ಬಿರಿಯಾನಿನೇ ಸಿಕ್ಕಂತೆ ಆಗಿದೆ ಅಂತಲೇ ಪ್ರಮೋದ್ ಶೆಟ್ರು ಹೇಳಿಕೊಂಡಿದ್ದಾರೆ.
ಚಿತ್ರದ ಟ್ರೈಲರ್ ಅಲ್ಲಿ ಪಾತ್ರ ರಿವೀಲ್
ಪ್ರಮೋದ್ ಶೆಟ್ಟಿ ಪಾತ್ರದ ಝಲಕ್ ರಿವೀಲ್ ಆಗಿದೆ. ಚಿತ್ರದ ಟ್ರೈಲರ್ ಅಲ್ಲಿ ಪ್ರಮೋದ್ ಪಾತ್ರ ರಿವೀಲ್ ಆಗಿದೆ. ಎರಡ್ಮೂರು ದೃಶ್ಯಗಳು ಇಲ್ಲಿ ರಿವೀಲ್ ಆಗಿದೆ
ಫ್ಯಾನ್ಸ್ ಕ್ಲೀನ್ ಬೌಲ್ಡ್!
ಚಿತ್ರದಲ್ಲಿ ಇವರ ಪಾತ್ರಕ್ಕೂ ಮಹತ್ವ ಇದೆ. ಈ ಒಂದು ಮಹತ್ವದ ಪಾತ್ರದ ಬಗ್ಗೆ ಪ್ರಮೋದ್ ಶೆಟ್ರಿಗೆ ಖುಷಿನೂ ಇದೆ. ಆ ಒಂದು ಸಂತೋಷವನ್ನ ತಮ್ಮದೇ ಶೈಲಿಯಲ್ಲಿಯೇ ಹೇಳಿಕೊಂಡಿದ್ದಾರೆ.



