45 ಬಂದ್ಮೇಲೆ ಅರ್ಜುನ್ ಜನ್ಯ ಬೇರೆ ಲೆವೆಲ್ಗೆ ಹೋಗ್ತಾರೆ ಎಂದ ಶಿವಣ್ಣ
ಉತ್ತಿಷ್ಠಭಾರತ Uttishtabharatha ಸುದ್ದಿ ಜಾಲತಾಣ ವರದಿ: ಡೈರೆಕ್ಟರ್ ಅರ್ಜುನ್ ಜನ್ಯ (Arjun Janya) ಮೇಲೆ ಸಾಕಷ್ಟು ನಂಬಿಕೆ ಇದೆ.
ಚಿತ್ರೀಕರಣದ ಮುಂಚೇನೆ 45 ಚಿತ್ರವನ್ನ ಚಿತ್ರದ ನಾಯಕರು ನೋಡಿದ್ದಾರೆ. ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ (Ramesh Reddy) ಕೂಡ ವೀಕ್ಷಿಸಿದ್ದಾರೆ.
ಹಾಗಾಗಿಯೇ ಇಡೀ ತಂಡಕ್ಕೆ ಚಿತ್ರದ ಬಗ್ಗೆ ಭಾರೀ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ (Shiva Rajkumar) ಒಂದು ಮಾತು ಹೇಳಿದ್ದಾರೆ.
45 ಚಿತ್ರ (45 Movie) ಬಂದ್ಮೇಲೆ ಅರ್ಜುನ್ ಜನ್ಯ ಎಲ್ಲೋ ಹೋಗ್ತಾರೆ. ಬೇರೆ ಲೆವೆಲ್ಗೇನೆ ಹೋಗ್ತಾರೆ ಅಂತ ಹೇಳಿದ್ದಾರೆ. ಇವರ ಮಾತುಗಳ ಇತರ ವಿವರ ಇಲ್ಲಿದೆ ಓದಿ.
ಎಲ್ಲೋ ಹೋಗ್ತಾರೆ ಅರ್ಜುನ್ ಜನ್ಯ
ಅರ್ಜುನ್ ಜನ್ಯ ಒಳ್ಳೆ ಸಿನಿಮಾ ಮಾಡಿದ್ದಾರೆ. ಸ್ಕ್ರಿಪ್ಟ್ ಕೂಡ ಚೆನ್ನಾಗಿ ಮಾಡಿಕೊಂಡಿದ್ದಾರೆ. ಅನಿಮೇಷನ್ ಅಲ್ಲಿಯೇ 45 ಚಿತ್ರವನ್ನ ನಾಯಕರು ನೋಡಿದ್ದಾರೆ. ನೋಡಿದ್ಮೇಲೆ ಬಹುವಾಗಿಯೇ ಮೆಚ್ಚಿಕೊಂಡಿದ್ದಾರೆ.
ಚಿತ್ರೀಕರಣದ ಸಮಯದಲ್ಲಿ ನಾಯಕರು ಸಿಕ್ಕಾಪಟ್ಟೆ ಎಂಜಾಯ್ ಕೂಡ ಮಾಡಿದ್ದಾರೆ. ಇವರಿಗೆ ಚಿತ್ರದ ಮೇಲೆ ಅಷ್ಟು ವಿಶ್ವಾಸವೂ ಇದೆ. ಆ ಹಿನ್ನೆಲೆಯಲ್ಲಿಯೇ ಶಿವರಾಜ್ ಕುಮಾರ್ ಅತಿ ದೊಡ್ಡ ಗೆಲುವಿನ ಭರವಸೆಯ ಮಾತುಗಳನ್ನ ಆಡಿದ್ದಾರೆ.
ಅರ್ಜುನ್ ಜನ್ಯ ಗೆಲ್ಲುತ್ತಾರೆ
ಅರ್ಜುನ್ ಜನ್ಯ ಒಳ್ಳೆ ಕೆಲಸ ಮಾಡಿದ್ದಾರೆ. ಇವರು ಪಕ್ಕಾ ಗೆಲ್ಲುತ್ತಾರೆ. ಇವರ ಅಭಿಮಾನಿಯಾಗಿಯೇ ನಾನು ಹೇಳುತ್ತಿದ್ದೇನೆ. ನನ್ನ ಸಿಕ್ಸ್ತ್ ಸೆನ್ಸ್ ಹೇಳುತ್ತಿದೆ.
ಈ ಚಿತ್ರ ದೊಡ್ಡಮಟ್ಟದಲ್ಲಿಯೇ ಗೆಲ್ಲುತ್ತದೆ. ಈ ಚಿತ್ರದಿಂದ ಅರ್ಜುನ್ ಜನ್ಯ ಎಲ್ಲೋ ಹೋಗುತ್ತಾರೆ. ಇವರು ಆ ರೀತಿನೇ ಕೆಲಸ ಮಾಡಿದ್ದಾರೆ. ಅನಿಮೇಷನ್ ಅಲ್ಲಿಯೇ ನಾವೆಲ್ಲ ಚಿತ್ರ ನೋಡಿದ್ದೇವೆ ಅಂತಲೇ ಶಿವರಾಜ್ ಕುಮಾರ್ ಹೇಳಿದ್ದಾರೆ.
45 ಟ್ರೈಲರ್ ಇವೆಂಟ್
ಶಿವರಾಜ್ ಕುಮಾರ್ ಈ ಒಂದು ವಿಶ್ವಾಸದ ಮಾತುಗಳನ್ನ 45 ಚಿತ್ರದ ಇವೆಂಟ್ ಅಲ್ಲಿಯೇ ಹೇಳಿಕೊಂಡಿದ್ದಾರೆ. ಚಿತ್ರದ ಟ್ರೈಲರ್ ರಿಲೀಸ್ ಆದ್ಮೇಲೆ ತಮ್ಮ ಖುಷಿಯನ್ನ ಮೇಲೆ ಹೇಳಿದಂತೆ ಹಂಚಿಕೊಂಡಿದ್ದಾರೆ.45 ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅಭಿನಯಿಸಿದ್ದಾರೆ.
ಕಾಮನ್ ಮ್ಯಾನ್ ಪಾತ್ರವನ್ನೆ ಮಾಡಿದಂತೆ ಇದೆ. ಉಪೇಂದ್ರ ಅವರ ರೋಲ್ ಸೂಪರ್ ಅನಿಸುತ್ತದೆ. ಶಿವಣ್ಣ ಮತ್ತು ಉಪ್ಪಿ ಜೋಡಿ ಇಲ್ಲಿ ಹೊಸ ರೀತಿನೇ ಮೋಡಿ ಮಾಡಿದಂತೆ ಇದೆ.



