ಇಳಿಕೆ ಕಂಡಿದ್ದ ಬಂಗಾರ-ಬೆಳ್ಳಿ ಇಂದು ಮತ್ತೆ ಏರಿಕೆ: ಚಿನ್ನದ ಬೆಲೆಯ ಹಾವು-ಏಣಿ ಆಟ ನೋಡಿ ಸುಸ್ತಾದ ಗ್ರಾಹಕರು
ಚಿನ್ನ… ಪ್ರತಿ ಮಹಿಳೆಯರ ಮೊದಲ ಆಯ್ಕೆ. ಯಾವುದಾದರೂ ದೊಡ್ಡ ಮೊತ್ತ ಇದ್ದರೆ ಏನು ತೆಗೆದುಕೊಳ್ಳಬೇಕು ಅಂದಾಕ್ಷಣ ಮಹಿಳೆಯರ ಮೊದಲ ಆಯ್ಕೆಯೇ ಬಂಗಾರ. ಮಹಿಳೆಯರು ಮಾತ್ರವಲ್ಲ, ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಹೂಡಿಕೆಯ ರೂಪದಲ್ಲೇ ಬಂಗಾರ-ಬೆಳ್ಳಿಯನ್ನು ನೋಡುತ್ತಿದ್ದಾರೆ. ವರ್ಷ ಮುಗಿಯತ್ತ ಬಂದರೂ ಬಂಗಾರ-ಬೆಳ್ಳಿಯ ಬೆಲೆ ಏರುತ್ತಲೇ ಇದೆ. ಈ ವರ್ಷಂತೂ ಬಂಗಾರ ಪ್ರಿಯರಿಗೆ ಮರೆಯಲಾಗದ ವರ್ಷವಾಗಿದೆ ಎಂದು Uttishtabharatha (ಉತ್ತಿಷ್ಠಭಾರತ) ವರದಿ ಮಾಡುತ್ತದೆ. ವರ್ಷದ ಆರಂಭದಿಂದಲೇ ಬೆಳ್ಳಿ-ಬಂಗಾರದ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ವರ್ಷದ ಕೊನೆಯಲ್ಲಿ ಬಂಗಾರದ ದರ ಕೇಳಿದರೆ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳ್ಳಿಯ ಬೆಲೆಯಂತೂ ಬಂಗಾರದ ದರಕ್ಕೂ ಪೈಪೋಟಿ ನೀಡುವಂತೆ ಏರುತ್ತಿದೆ.
ದಿನಂಪ್ರತಿ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ಬದಲಾಗುತ್ತಲೇ ಇದ್ದು ಇದೊಂದು ದಿನನಿತ್ಯ ನಡೆಯುವ ವಿದ್ಯಮಾನವಾಗಿಬಿಟ್ಟಿದೆ. ಹಾಗಾದರೆ ನಾವಿಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಎಷ್ಟು? ಎಷ್ಟೇಲ್ಲಾ ಏರಿಕೆ ಕಂಡಿದೆ ಎಂಬುದರ ಫುಲ್ ಡಿಟೇಲ್ಸ್ ತಿಳಿಯೋಣ.
ಮಹಾನಗರಗಳಲ್ಲಿ ಇವತ್ತು ಎಷ್ಟಿದೆ ಚಿನ್ನದ ರೇಟ್?
ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಒಂದು ಗ್ರಾಂ) ರೂ. 12,330 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 12,400, ರೂ. 12,330 ರೂ. 12,330 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 12,345 ರೂ. ಆಗಿದೆ.
ಮಾರುಕಟ್ಟೆ ಗೋಲ್ಡ್ ರೇಟ್
ಇಂದು ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 10,088 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 12,330 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 13,451 ಆಗಿದೆ.
ಅದೇ ಎಂಟು ಗ್ರಾಂ (8GM) 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 80,704 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 98,640 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 1,07,608 ಆಗಿದೆ.
ಇನ್ನು ಹತ್ತು ಗ್ರಾಂ (10GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 1,00,880 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 1,23,300 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 1,34,150 ಆಗಿದೆ.
ಬೆಳ್ಳಿ ರೇಟ್
ಚಿನ್ನಕ್ಕೆ ಹೇಗೆ ಮಾನ್ಯತೆ ಇದೆಯೋ ಅಂತೆಯೇ ಬೆಳ್ಳಿಗೂ ಒಳ್ಳೆಯ ಮೌಲ್ಯವಿದ್ದು ಬೆಳ್ಳಿ ಖರೀದಿಯಲ್ಲೂ ಗ್ರಾಹಕರು ಹಿಂದೆ ಬಿದ್ದಿಲ್ಲ. ಬೆಳ್ಳಿಯ ಡಿಸೈನ್ ಡಿಸೈನ್ ಆಭರಣಗಳು ಚಿನ್ನಕ್ಕೆ ಸಡ್ಡು ಹೊಡೆಯುವಂತಿದ್ದು ಇವುಗಳ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ. ಬೆಳ್ಳಿ ಖರೀದಿಯ ಪ್ಲ್ಯಾನ್ ಇದ್ದರೆ ಬೆಲೆ ತಿಳಿಯೋಣ.
ಇಂದು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ದರ ರೂ. 2,08,000 ಆಗಿದೆ. ಬೆಂಗಳೂರು ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 2,080 ರೂ. 20,800 ಹಾಗೂ ರೂ. 2,08,000 ಗಳಾಗಿವೆ.
ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 2,22,000 ಆಗಿದ್ದರೆ, ದೆಹಲಿಯಲ್ಲಿ ರೂ. 2,08,000, ಮುಂಬೈನಲ್ಲಿ ರೂ2,08,000 ಹಾಗೂ ಕೊಲ್ಕತ್ತದಲ್ಲೂ ರೂ. 2,08,000 ಗಳಾಗಿದೆ.



