ಕ್ಯಾಮರೂನ್ ಗ್ರೀನ್ಗೆ ಜಾಕ್ ಪಾಟ್! ಐಪಿಎಲ್ ಇತಿಹಾಸದಲ್ಲೇ ದುಬಾರಿ ವಿದೇಶಿ ಪ್ಲೇಯರ್ ಎನಿಸಿಕೊಂಡ ಆಸೀಸ್ ಆಲ್ರೌಂಡರ್
ಆಸ್ಟ್ರೇಲಿಯಾದ ಸ್ಫೋಟಕ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಐಪಿಎಲ್ ಮಿನಿ ಹರಾಜಿನಲ್ಲಿ ಜಾಕ್ ಪಾಟ್ ಹೊಡೆದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಆಸೀಸ್ ತಂಡದ ಸ್ಫೋಟಕ ಆಲ್ರೌಂಡರ್ಗೆ ಬರೋಬ್ಬರಿ 25. 20 ಕೋಟಿ ರೂಪಾಯಿಗೆ ಖರೀದಿಸಿದೆ.
ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಮರೂನ್ ಗ್ರೀನ್ಗೆ ಪೈಪೋಟಿ ನಡೆಸಿದರಾದರೂ, ಅತಿ ಹೆಚ್ಚು ಹಣದೊಂದಿಗೆ ಹರಾಜು ಪ್ರವೇಶಿಸಿರುವ ಕೆಕೆಆರ್ ಆಸೀಸ್ ಆಲ್ರೌಂಡರ್ರನ್ನ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಗ್ರೀನ್ ಹಿಂದೆ ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿಯಲ್ಲಿ ಆಡಿದ್ದರು.
ಎಲ್ಲರ ನಿರೀಕ್ಷೆಯಂತೆ ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಬ್ಯಾಟರ್ ಆಗಿ ನೋಂದರಣಿ ಮಾಡಿಸಿಕೊಂಡರು. ಆದರೆ ಅವರ ಆಲ್ರೌಂಡ್ ಸಾಮರ್ಥ್ಯದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಖರೀದಿಸಲು ಆಕ್ರಮಣಕಾರಿಯಾಗಿ ಬಿಡ್ ಮಾಡಿತು. ಅಂತಿಮವಾಗಿ, ಕೆಕೆಆರ್ 25.2 ಕೋಟಿ ರೂ.ಗೆ ಪಡೆಯುವಲ್ಲಿ ಯಶಸ್ವಿಯಾಯಿತು.
ದುಬಾರಿ ಬೆಲೆ ಪಡೆದ ವಿದೇಶಿ ಆಟಗಾರ
ಕ್ಯಾಮರೂನ್ ಗ್ರೀನ್ 25.2 ಕೋಟಿ ಪಡೆಯುವ ಮೂಲಕ ಐಪಿಎಲ್ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆದ ವಿದೇಶಿ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. ಈ ಹಿಂದೆ ಮಿಚೆಲ್ ಸ್ಟಾರ್ಕ್ 2024ರ ಮಿನಿ ಹರಾಜಿನಲ್ಲಿ ಕೆಕೆಆರ್ 24.75 ಕೋಟಿ ನೀಡಿ ಖರೀದಿಸಿತ್ತು.
ಇದೀಗ ಆ ದಾಖಲೆಯನ್ನ ಗ್ರೀನ್ ಬ್ರೇಕ್ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಹೆನ್ರಿಕ್ ಕ್ಲಾಸೆನ್ 23 ಕೋಟಿಗೆ ಸನ್ರೈಸರ್ಸ್ ಹೈದರಾಬಾದ್ ರಿಟೇನ್ ಮಾಡಿಕೊಂಡಿದೆ. ಅವರು ಅತಿ ಹೆಚ್ಚು ಮೊತ್ತ ಪಡೆದ ವಿದೇಶಿ ಆಟಗಾರರಲ್ಲಿ 3ನೇ ಸ್ಥಾನ ಪಡೆದಿದ್ದಾರೆ.
ನಿಕೋಲಸ್ ಪೂರನ್ 21 ಕೋಟಿ, ಪ್ಯಾಟ್ ಕಮಿನ್ಸ್ 20. 5 ಕೋಟಿ ರೂಪಾಯಿಗೆ ಖರೀದಿಸಿತ್ತು.
ಕೇವಲ 18 ಕೋಟಿ ಮಾತ್ರ ಪಡೆಯಲಿರುವ ಗ್ರೀನ್
ಹರಾಜಿನಲ್ಲಿ 25.2 ಕೋಟಿ ಪಡೆದರೂ ಬಿಸಿಸಿಐ ಹೊಸ ನಿಯಮಗಳ ಪ್ರಕಾರ ಕ್ಯಾಮರೂನ್ ಗ್ರೀನ್ ಕೇವಲ 18 ಕೋಟಿ (ಅತ್ಯಧಿಕ ರಿಟೇನ್ ಬೆಲೆ) ಮಾತ್ರ ಪಡೆಯಲಿದ್ದಾರೆ.
ಆದರೆ ಭಾರತೀಯ ಆಟಗಾರರಿಗೆ ಯಾವುದೇ ಮಿತಿ ಇಲ್ಲ ಮತ್ತು ಅವರ ಬೆಲೆ ರೂ. 18 ಕೋಟಿ ಮೀರಬಹುದು. ಉಳಿದ ಹಣ ಬಿಸಿಸಿಐಗೆ ಸೇರಲಿದೆ.
ವಿದೇಶಿ ಆಟಗಾರರು ಮೆಹಾ ಹರಾಜಿನಲ್ಲಿ ತಮ್ಮ ಹೆಸರುಗಳನ್ನ ನೋಂದಾಯಿಸಿಕೊಳ್ಳದೇ, ಕೇವಲ ಮಿನಿ ಹರಾಜಿನಲ್ಲಿ ಮಾತ್ರ ನೋಂದಾಯಿಸಿಕೊಳ್ಳುತ್ತಿದ್ದರು.
ಈ ವೇಳೆ ಹರಾಜಿನಲ್ಲಿ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನ ಖರೀದಿಸಲು ದುಬಾರಿ ವೆಚ್ಚ ಖರ್ಚು ಮಾಡುತ್ತಿದ್ದರು. ಇದರಿಂದ ತಂಡದ ಸಮತೋಲನ ಕಳೆದಕೊಳ್ಳುತ್ತಿತ್ತು.
ಮೆಗಾ ಹರಾಜಿಗಿಂತಲೂ ಮಿನಿ ಹರಾಜಿನಲ್ಲಿ ಹೆಚ್ಚು ವೆಚ್ಚವಾಗಿ ತಂಡಕ್ಕೆ ಬೇಕಾದ ಆಟಗಾರರನ್ನ ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ 2025ರಲ್ಲಿ ಐಪಿಎಲ್ ಹಾಗೂ ಬಿಸಿಸಿಐ ಮಂಡಳಿಗಳು ಈ ನಿಯಮ ಜಾರಿಗೆ ತಂದಿವೆ.
ಮುಂದಿನ ಮೆಗಾ ಹರಾಜಿನ ವೇಳೆಯಾದರೂ ವಿದೇಶಿ ಆಟಗಾರರು ತಮ್ಮ ಹೆಸರನ್ನ ನೋಂದಾಯಿಸಿಕೊಳ್ಳಲು ಈ ನಿಯಮ ನೆರವಾಗಲಿದೆ.
ಕ್ಯಾಮರೂನ್ ಗ್ರೀನ್ ದಾಖಲೆ
ಕ್ಯಾಮರೂನ್ ಗ್ರೀನ್ ಐಪಿಎಲ್ನಲ್ಲಿ 29 ಪಂದ್ಯಗಳನ್ನಾಡಿದ್ದು, 153ರ ಸ್ಟ್ರೈಕ್ರೇಟ್ನಲ್ಲಿ 707 ರನ್ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 2 ಅರ್ಧಶತಕಗಳಿವೆ. ಬೌಲಿಂಗ್ನಲ್ಲೂ 16 ವಿಕೆಟ್ ಪಡೆದಿದ್ದಾರೆ.
ಒಟ್ಟಾರೆ ಟಿ20 ಕ್ರಿಕೆಟ್ನಲ್ಲಿ 63 ಪಂದ್ಯಗಳಿಂದ 1 ಶತಕ, 8 ಅರ್ಧಶತಕಗಳ ನೆರವಿನಿಂದ 1334 ರನ್ಗಳಿಸಿದ್ದಾರೆ. ಬೌಲಿಂಗ್ನಲ್ಲಿ 28 ವಿಕೆಟ್ ಪಡೆದಿದ್ದಾರೆ



