MGNREGA ಬದಲು VB-G RAM G ಜಾರಿಗೆ ಮುಂದಾದ ಸರ್ಕಾರ; ಈ ಎರಡರ ನಡುವಿನ ವ್ಯತ್ಯಸ ಏನು ಗೊತ್ತಾ?
ಗ್ರಾಮೀಣ ಭಾರತದಲ್ಲಿ (Rural India) ಉದ್ಯೋಗ ಭದ್ರತೆ ಮತ್ತು ಜೀವನೋಪಾಯವು ದಶಕಗಳಿಂದಲೂ ದೇಶದ ಪ್ರಮುಖ ಸವಾಲಾಗಿಯೇ ಉಳಿದಿದೆ.
ಆ ಕಾರಣದಿಂದ 2005ರಲ್ಲಿ ಜಾರಿಗೆ ಬಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯು (Mahatma Gandhi National Rural Employment Guarantee Act) ಗ್ರಾಮೀಣ ಕುಟುಂಬಗಳಿಗೆ ಕನಿಷ್ಠ ಆದಾಯದ (Minimum income) ಭರವಸೆಯನ್ನು ನೀಡುವಲ್ಲಿ ಮಹತ್ವದ ಪಾತ್ರ ವಹಿಸಿತ್ತು.
ಆದರೆ ಕಾಲ ಬದಲಾಗುತ್ತಿದ್ದಂತೆ ಗ್ರಾಮೀಣ ಆರ್ಥಿಕತೆಯ ಅಗತ್ಯಗಳು, ಉದ್ಯೋಗದ ಸ್ವರೂಪ ಮತ್ತು ಆಡಳಿತದ ನಿರೀಕ್ಷೆಗಳೂ ಬದಲಾಗಿವೆ.
ಇದೇ ಹಿನ್ನೆಲೆಯಲ್ಲೇ ಕೇಂದ್ರ ಸರ್ಕಾರ MGNREGA ಅನ್ನು ಬದಲಿಸಿ ಹೊಸದಾಗಿ ವಿಕ್ಷಿತ್ ಭಾರತ್ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಅಂದರೆ VB-GRAM ಮಸೂದೆ 2025 ಅನ್ನು ಜಾರಿಗೆ ತರಲು ಮುಂದಾಗಿದೆ.
ಈ ಹೊಸ ಮಸೂದೆಯು ಗ್ರಾಮೀಣ ಪ್ರದೇಶಗಳ ಕಾರ್ಮಿಕರಿಗೆ ಮತ್ತು ಯುವಕರಿಗೆ ಹೆಚ್ಚಿನ ವೈವಿಧ್ಯಮಯ ಉದ್ಯೋಗಾವಕಾಶಗಳನ್ನು ಒದಗಿಸುವುದರೊಂದಿಗೆ ಅಭಿವೃದ್ಧಿ, ತರಬೇತಿ, ಸ್ವಉದರ ಉದ್ಯೋಗದ ಪ್ರೋತ್ಸಾಹ ಮತ್ತು ಉದ್ಯಮಶೀಲತೆಯನ್ನು ಬೆಂಬಲಿಸುತ್ತದೆ.
ಇದರಿಂದ ಬಲವಾದ ಉದ್ಯೋಗದ ಖಾತರಿ, ಹೆಚ್ಚಿನ ಆದಾಯ ಮತ್ತು ಜೀವನಮಟ್ಟದ ಸುಧಾರಣೆ ಸಾಧ್ಯವಾಗುತ್ತದೆ.
VB-GRAM ಯುವಕರಿಗೆ ತರಬೇತಿ ಕಾರ್ಯಕ್ರಮಗಳು, ಉದ್ಯೋಗ ದಕ್ಷತೆ ಸುಧಾರಣೆ, ಸ್ವಊದ್ಯಮ ಆರಂಭಿಸಲು ನೆರವು, ಮತ್ತು ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಒದಗಿಸುವ ಮೂಲಕ ಶ್ರೀಮಂತಿಯನ್ನು ಹೆಚ್ಚಿಸುತ್ತದೆ. ಈ ಕಾರಣಗಳಿಂದ ನೂತನ ಮಸೂದೆ ಗ್ರಾಮೀಣ ಅಭಿವೃದ್ಧಿಗೆ ಹೊಸ ಗತಿ ನೀಡುತ್ತದೆ.
MGNREGA ಎಂದರೇನು?
MGNREGA 2005ರಲ್ಲಿ ಜಾರಿಗೆ ಬಂದ ಮಹತ್ವದ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಖಾತರಿಯ ವೇತನದ ಉದ್ಯೋಗ ಒದಗಿಸುವುದೇ ಇದರ ಮೂಲ ಉದ್ದೇಶವಾಗಿತ್ತು.
ಈ ಯೋಜನೆಯ ಮೂಲಕ ಗ್ರಾಮೀಣ ಬಡವರಿಗೆ ಆರ್ಥಿಕ ಭದ್ರತೆ ದೊರಕಿದ್ದು, ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ. ಜೊತೆಗೆ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಸಹ ಇದು ಸಹಕಾರಿಯಾಗಿದೆ.
ರಸ್ತೆ, ಕೆರೆ, ಕಾಲುವೆ, ನೀರು ಸಂರಕ್ಷಣಾ ಕಾರ್ಯಗಳು ಮತ್ತು ಪರಿಸರ ಸಂರಕ್ಷಣಾ ಯೋಜನೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಗೆ ದೀರ್ಘಕಾಲೀನ ಲಾಭವನ್ನು ನೀಡುತ್ತಿದೆ.
ಹೊಸ ಬದಲಾವಣೆ ಯಾಕೆ?
MGNREGA ಕಳೆದ 20 ವರ್ಷಗಳಿಂದ ಗ್ರಾಮೀಣ ಕುಟುಂಬಗಳಿಗೆ ಕೌಶಲ್ಯ ರಹಿತ ಉದ್ಯೋಗ ಮತ್ತು ವೇತನ ಭದ್ರತೆಯನ್ನು ಒದಗಿಸಿದೆ.
ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಈ ಯೋಜನೆಯನ್ನು ಇನ್ನಷ್ಟು ಸಮಗ್ರ ಮತ್ತು ಭವಿಷ್ಯಮುಖಿಯಾಗಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಕೇಂದ್ರ ಸರ್ಕಾರದಲ್ಲಿದೆ.
ಅದರಂತೆ, ವಿಕ್ಷಿತ್ ಭಾರತ್ 2047 ಎಂಬ ರಾಷ್ಟ್ರೀಯ ದೃಷ್ಟಿಕೋನಕ್ಕೆ ಅನುಗುಣವಾಗಿ, ಗ್ರಾಮೀಣ ಅಭಿವೃದ್ಧಿಯನ್ನು ಕೇವಲ ಉದ್ಯೋಗದ ಮಟ್ಟಕ್ಕೆ ಸೀಮಿತಗೊಳಿಸದೆ, ಜೀವನೋಪಾಯ, ಮೂಲಸೌಕರ್ಯ ಮತ್ತು ಸ್ಥಿರತೆಯೊಂದಿಗೆ ಜೋಡಿಸುವುದು VB-G RAM G ಮಸೂದೆಯ ಪ್ರಮುಖ ಗುರಿಯಾಗಿದೆ.



