ನೀವು ಅಮೆರಿಕ ಕನಸು ಕಂಡಿದ್ರೆ ಬಿಟ್ಟುಬಿಡಿ: ಮತ್ತೆ 5 ದೇಶ ಸೇರಿ 30ಕ್ಕೂ ಹೆಚ್ಚು ದೇಶಗಳಿಗೆ ಪ್ರಯಾಣ ನಿಷೇಧಿಸಿದ ಟ್ರಂಪ್! ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆಡಳಿತ ತನ್ನ ದೇಶದ ಪ್ರಯಾಣ ನಿಷೇಧವನ್ನು (Travel Ban) ಮತ್ತಷ್ಟು ವಿಸ್ತರಿಸಿದೆ. ಇತ್ತೀಚಿಗೆ ನಡೆಯುತ್ತಿರುವ ಗಲಭೆ, ಗುಂಡು ಹಾರಿಸುವ ಪ್ರಕರಣಗಳು ಮತ್ತು ಇದರಲ್ಲಿ ಅಫ್ಘಾನ್ ರಾಷ್ಟ್ರೀಯನೊಬ್ಬನನ್ನು ಬಂಧಿಸಿದ ನಂತರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ವಲಸೆ ನಿಯಂತ್ರಣದಲ್ಲಿ ಕಠಿಣ ಕ್ರಮಗಳನ್ನು ಮುಂದುವರಿಸಿದೆ. ಈಗ 30ಕ್ಕೂ ಹೆಚ್ಚು ದೇಶಗಳ...
