ನರೇಂದ್ರ ಮೋದಿಗಾಗಿ ಕಾರು ಚಲಾಯಿಸಿದ ನೊಬೆಲ್ ಪ್ರಶಸ್ತಿ ವಿಜೇತ ಪ್ರಧಾನಿ! ಇಥಿಯೋಪಿಯದಲ್ಲಿ ಭಾರತದ ಪ್ರಧಾನಿಗೆ ಗೌರವ
ಕೆಲವೊಮ್ಮೆ ಜಿಯೋ ಪಾಲಿಟಿಕ್ಸ್ನಲ್ಲಿ (Geopolitics) ಸಣ್ಣ ಸಣ್ಣ ಕ್ಷಣಗಳೇ ದೊಡ್ಡ ಸಂದೇಶವೊಂದನ್ನು ನೀಡುತ್ತದೆ.
ಹೌದು, ರಾಷ್ಟ್ರ ನಾಯಕರ ಪ್ರೋಟೋಕಾಲ್ಗಿಂತಲೂ ಆತ್ಮೀಯತೆಯೇ ಹೆಚ್ಚು ಮಾತನಾಡುವ ಇಂತಹ ಸಂದರ್ಭಗಳು ರಾಷ್ಟ್ರಗಳ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ.
ಅದಕ್ಕೆ ಸ್ಪಷ್ಟ ಉದಾಹರಣೆ: ಇತ್ತೀಚೆಗೆ ಪ್ರಧಾನಿ (Prime Minister) ನರೇಂದ್ರ ಮೋದಿ (Prime Minister Narendra Modi) ಅವರ ವಿದೇಶಿ ಪ್ರವಾಸಗಳಲ್ಲಿ ಕಂಡುಬರುತ್ತಿರುವ ಕಾರ್ ಡಿಪ್ಲೊಮಸಿ!
ಹೌದು, ಕೆಲ ತಿಂಗಳುಗಳಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರ ವಿದೇಶಿ ಪ್ರವಾಸದ ವೇಳೆ ಕಂಡುಬರುತ್ತಿರುವ ಕಾರ್ ಡಿಪ್ಲೊಮಸಿಯು ಇದೀಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.
ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯ ವೇಳೆ ಪ್ರಧಾನಿ ಮೋದಿಯನ್ನು ರಷ್ಯಾಧಿಪತಿ ಪುಟಿನ್ ತಮ್ಮ ಕಾರಿನಲ್ಲಿಯೇ ಶೃಂಗಸಭೆ ನಡೆಯುವ ಸ್ಥಳಕ್ಕೆ ಕರೆದುಕೊಂಡು ಹೋದರು.
ಇದಾದ ನಂತರ ಪುಟಿನ್ ಭಾರತಕ್ಕೆ ಭೇಟಿ ನೀಡಿದ ವೇಳೆ ಮೋದಿ ತಮ್ಮ ಸ್ನೇಹಿತನನ್ನು ತಮ್ಮ ಕಾರಿನಲ್ಲಿಯೇ ಕರೆದುಕೊಂಡು ಬಂದರು. ಇದು ಭಾರತ ಹಾಗೂ ರಷ್ಯಾ ಸ್ನೇಹದಲ್ಲಿ ಹೊಸ ಮೈಲಿಗಲ್ಲು.
ಈ ಪ್ರವೃತ್ತಿ ಮೋದಿಯವರು ಇತ್ತೀಚಿನ ಭೇಟಿ ವೇಳೆಯೂ ಮುಂದುವರೆದಿದೆ. ಹೌದು, ಇಂದು ಬೆಳಿಗ್ಗೆ ಜೋರ್ಡಾನ್ ಕ್ರೌನ್ ಪ್ರಿನ್ಸ್ ಅಲ್ ಹುಸೇನ್ ಅವರು ಖುದ್ದು ಕಾರನ್ನು ಚಲಾಯಿಸುವ ಮೂಲಕ ಪ್ರಧಾನಿ ಮೋದಿಯನ್ನ ವಿಮಾನ ನಿಲ್ದಾಣದ ತನಕ ಬಂದು ಬೀಳ್ಕೊಟ್ಟರು.
ಇದಾದ ಕೆಲವೇ ಗಂಟೆಗಳಲ್ಲಿ ಮತ್ತೊಂದು ದೇಶದ ಪ್ರಧಾನ ಮಂತ್ರಿ ಮೋದಿಯವರನ್ನು ಖುದ್ದು ವಿಮಾನ ನಿಲ್ದಾಣಕ್ಕೆ ಬಂದು ತಮ್ಮ ಕಾರಿನಲ್ಲಿ ತಾವೇ ಡ್ರೈವ್ ಮಾಡುವ ಮೂಲಕ ಕರೆದುಕೊಂಡು ಹೋಗಿದ್ದಾರೆ. ಆದರೆ ಈತ ಸಾಮಾನ್ಯ ಪ್ರಧಾನಿಯಲ್ಲ, ನೊಬೆಲ್ ಪ್ರಶಸ್ತಿ ಗೆದ್ದ ಪ್ರಧಾನಿ ಎನ್ನುವುದು ಮತ್ತೊಂದು ವಿಶೇಷ.
ಹೌದು, ಜೋರ್ಡಾನ್ ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಪ್ರವಾಸದ ಭಾಗವಾಗಿ ಇಥೋಯೋಪಿಯಾ ರಾಷ್ಟ್ರಕ್ಕೆ ಭೇಟಿ ನೀಡಿದ್ದಾರೆ.
ಈ ವೇಳೆ, ಇಥಿಯೋಪಿಯಾದ ಪ್ರಧಾನಮಂತ್ರಿ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಅಬಿಯ್ ಅಹ್ಮದ್ ಅವರೇ ಸ್ವತಃ ಕಾರು ಚಾಲನೆ ಮಾಡಿ ಪ್ರಧಾನಿ ಮೋದಿಯನ್ನು ಕರೆದೊಯ್ದಿದ್ದಾರೆ.
ಈ ಘಟನೆಯು ಭಾರತ ಹಾಗೂ ಇಥಿಯೋಪಿಯಾ ದೇಶಗಳ ನಡುವಿನ ಸ್ನೇಹಕ್ಕೆ ಹೊಸ ಅಧ್ಯಾಯ ಬರದಂತಾಗಿದೆ.
ಸ್ವತಃ ಕಾರು ಚಾಲಾಯಿಸಿದ ಪ್ರಧಾನಿ
ಇಥೋಯೋಪಿಯಾ ರಾಜಧಾನಿ ಆಡಿಸ್ ಅಬಾಬ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಂತೆ, ಖದ್ದು ಸ್ವಾಗತ ನೀಡಿದ ಇಥೋಯೋಪಿಯಾ ಪ್ರಧಾನಿ ಅಬಿಯ್ ಅಹ್ಮದ್.
ಅವರು, ಸ್ವತಃ ಕಾರು ಚಾಲನೆ ಮಾಡಿ ಪ್ರಧಾನಿ ಮೋದಿಯನ್ನು ಅವರು ತಂಗುವ ಹೋಟೆಲ್ಗೆ ಕರೆದೊಯ್ದರು.
ಈ ಪ್ರಯಾಣದ ವೇಳೆ ಯಾವುದೇ ಪೂರ್ವನಿಯೋಜಿತ ಕಾರ್ಯಕ್ರಮದಲ್ಲಿರದಿದ್ದರೂ, ಅವರು ಇಥೋಯೋಪಿಯಾದ ವಿಜ್ಞಾನ ಮ್ಯೂಸಿಯಂ ಮತ್ತು ಫ್ರೆಂಡ್ಶಿಪ್ ಪಾರ್ಕ್ನಲ್ಲಿ ಅಪ್ರತೀಕ್ಷಿತವಾಗಿ ನಿಲ್ಲಿಸಿದರು.
ಈ ಆತ್ಮೀಯ ಕ್ಷಣಗಳು ಅಧಿಕೃತ ಸಭೆಗಳಿಗಿಂತಲೂ ಹೆಚ್ಚು ಸ್ನೇಹಪೂರ್ಣ ಸಂದೇಶವನ್ನು ನೀಡಿದವುವಿದೇಶಾಂಗ ಸಚಿವಾಲಯದ ಪ್ರಕಾರ, “ಇಥಿಯೋಪಿಯಾ ಭಾರತಕ್ಕೆ ಗ್ಲೋಬಲ್ ಸೌತ್ನಲ್ಲಿ ಪ್ರಮುಖ ಪಾಲುದಾರ ದೇಶವಾಗಿದೆ.
ಜೊತೆಗೆ, ಇಥಿಯೋಪಿಯಾ ಕೂಡ ಬ್ರಿಕ್ಸ್ ಗುಂಪಿನ ಸದಸ್ಯ ರಾಷ್ಟ್ರವಾಗಿರುವುದು ಈ ಸಂಬಂಧಗಳಿಗೆ ಇನ್ನಷ್ಟು ಬಲ ನೀಡುತ್ತದೆ.
ಪ್ರಧಾನಿ ಮೋದಿ ಮತ್ತು ಅಬಿಯ್ ಅಹ್ಮದ್ ನಡುವಿನ ಸಭೆಗಳಲ್ಲಿ ದ್ವಿಪಕ್ಷೀಯ ಸಹಕಾರದ ಎಲ್ಲ ಆಯಾಮಗಳ ಕುರಿತು ವಿಸ್ತೃತ ಚರ್ಚೆಗಳು ನಡೆಯಲಿವೆ” ಎಂದು ತಿಳಿಸಿದೆ.



